ಮಲ್ಪೆ: ಬಲೆಗೆ ಬಿದ್ದ ವೇಲ್ ಶಾರ್ಕ್ ರಕ್ಷಿಸಿದ ಮೀನುಗಾರರಿಗೆ ಸನ್ಮಾನಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದ ವಿನಾಶದಂಚಿನಲ್ಲಿರುವ ವೇಲ್ ಶಾರ್ಕ್ (ಬೊಟ್ಟು ತಾಟೆ) ಅನ್ನು ಕೊಲ್ಲದೇ ಬಲೆಯಿಂದ ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರನ್ನು ಮಂಗಳೂರಿನ ಮೀನುಗಾರಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ, ಮೀನುಗಾರಿಕೆ ಇಲಾಖೆ ಮತ್ತು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.