ಅಂತರ್ ಧರ್ಮೀಯ ವಿವಾಹದಿಂದ ಹಿಂದುತ್ವಕ್ಕೆ ಧಕ್ಕೆಯಾಗುವುದಿಲ್ಲವೇ: ರಮೇಶ್ ಕಾಂಚನ್ಸ್ವಯಂಘೋಷಿತ ಹಿಂದೂ ಮುಖಂಡರಾಗಿ, ದ್ವೇಷಪೂರಿತ ಭಾಷಣದ ಮೂಲಕ ಐಷಾರಾಮಿ ಜೀವನ ನಡೆಸುತ್ತಿರುವ ಚಕ್ರವರ್ತಿ ಸೂಲಿಬೆಲೆ, ಮಂಗಳೂರಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅನ್ಯಧರ್ಮದ ಹುಡುಗಿಯರನ್ನು ಪ್ರೀತಿಸಿ ವಿವಾಹವಾಗಿ ಎಂದು ನೀಡಿರುವ ಕರೆಯಂತೆ ಹಿಂದೂ ಯುವಕರು ನಡೆದುಕೊಂಡರೆ ಹಿಂದುತ್ವಕ್ಕೆ ದಕ್ಕೆಯಾಗುವುದಿಲ್ಲವೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.