ಪೊಲೀಸ್ ಠಾಣೆ ಪರಿಸರದ 6 ಮನೆಗಳಲ್ಲಿ ಸರಣಿ ಕಳ್ಳತನ!ಎಲ್ಲ 6 ಮನೆಗಳ ಚಿಲಕಗಳನ್ನು ಬಲವಾಗಿ ಮೀಟಿ ತುಂಡರಿಸಿರುವ ಖದೀಮರು, 3 ಮನೆಗಳಿಂದ ಒಟ್ಟು 120 ಗ್ರಾಂ ಚಿನ್ನ, 40 ಸಾವಿರ ರು. ನಗದು ಕಳವು ಮಾಡಿದ್ದಾರೆ. ಉಳಿದ ಮೂರು ಮನೆಯಲ್ಲಿ ಯಾವುದೇ ಸೊತ್ತು ಕಳ್ಳತನವಾಗಿಲ್ಲ. ಕಳ್ಳರು ಚಿನ್ನ ಮತ್ತು ನಗದು ಕಳ್ಳತನಕ್ಕೆಂದೇ ಬಂದಿದ್ದು, ಟಿವಿ, ಕಂಪ್ಯೂಟರ್ ಇತ್ಯಾದಿಗಳನ್ನು ಮುಟ್ಟಿಲ್ಲ.