ಜಾತಿಗಣತಿ ವರದಿ ಮೊದಲು ಓದಿ, ಓದದೇ ವಿರೋಧಿಸಬೇಡಿ: ಜಯಪ್ರಕಾಶ್ ಹೆಗ್ಡೆವರದಿಯನ್ನು ಓದಿದರೆ ಯಾರು ವಿರೋಧಿಸುವುದಿಲ್ಲ, ನಾವು ಮಾಡಿರುವ ಸಮೀಕ್ಷೆ ಮತ್ತು ನಮ್ಮ ಸಲಹೆಗಳ ಬಗ್ಗೆ ನನಗೆ ಅಷ್ಟು ವಿಶ್ವಾಸವಿದೆ. ಈ ವರದಿ ತಯಾರಿಸುವುದಕ್ಕೆ 163 ಕೋಟಿ ರು. ಖರ್ಚಾಗಿದೆ. ಆದ್ದರಿಂದ ಈ ವರದಿಯನ್ನು ವಿರೋಧಿಸದೇ ಸ್ವೀಕರಿಸಿ ಎಂದು ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಹಸ್ತಾಂತರಿಸಿರುವ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಕೋರಿದ್ದಾರೆ.