ಮಲ್ಪೆ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಯಾಗದೇವರಿಗೆ ವಿಶೇಷ ಅಲಂಕಾರ, ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ದೇವಿ ಪಾರಾಯಣ, ಹೂವಿನ ಪೂಜೆ ಹಾಗೂ ವಿವಿಧ ಧಾರ್ಮಿಕ ಪೂಜಾ ವಿಧಾನಗಳು ಸಂದೇಶ್ ಭಟ್ ನೇತೃತ್ವದಲ್ಲಿ ನಡೆಯಿತು. ಸಾಮೂಹಿಕ ದೇವತಾ ಪ್ರಾರ್ಥನೆ, ಕುಮಾರಿ ಪೂಜೆ, ಸುವಾಸಿನಿ ಅರಾಧನೆ, ಪ್ರಸನ್ನ ಪೂಜೆ, ಪೂರ್ಣಾಹುತಿ, ಮಹಾಪೂಜೆ ಬಳಿಕ ಮಹಾಅನ್ನಸಂತರ್ಪಣೆ ನಡೆಯಿತು.