ಹಂಗಾರಕಟ್ಟೆ: 21ರಿಂದ ಯಕ್ಷೋತ್ಸವ ಯಕ್ಷಗಾನ ಸಪ್ತಾಹ21ರಂದು ಸಂಜೆ ಗಂಟೆ 5ಕ್ಕೆ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದರು ಎಡನೀರು ಮಠ ಸಪ್ತಾಹ ಉದ್ಘಾಟಿಸಲಿದ್ದಾರೆ. ಪ್ರತಿನಿತ್ಯವು 5 ಗಂಟೆಯಿಂದ ಉಪನ್ಯಾಸ, ಸಭಾಕಾರ್ಯಕ್ರಮ ಮತ್ತು ಕಲಾಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಬರುವ ತರತರಹದ ಯುದ್ಧ ಕುಣಿತಗಳು, ಸಾಂಪ್ರದಾಯಿಕ ಪೂರ್ವರಂಗ ಕುಣಿತಗಳು ನಂತರ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.