ಗ್ರಾಮ ಆಡಳಿತ ಕಚೇರಿಗಳಿಗೆ ಸ್ವಂತ ಕಟ್ಟಡ, ಶೌಚಾಲಯವೂ ಇಲ್ಲ!ರಾಜ್ಯದಲ್ಲಿ ಗ್ರಾಮಾಡಳಿತಾಧಿಕಾರಿಗಳ ಮುಷ್ಕರ ಏಳನೆ ದಿನ ಪೂರೈಸಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಎಲ್ಲ ಗ್ರಾಮಾಧಿಕಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಒಂದೆಡೆ ಸರ್ಕಾರದ ಸೇವೆಗಳು ವ್ಯತ್ಯಯವಾಗಿದ್ದು ಇನ್ನೊಂದೆಡೆ ಗ್ರಾಮಾಡಳಿತ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲ, ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯೇ ಇಲ್ಲ ಎಂಬ ಅಂಶಗಳು ಬೆಳಕಿಗೆ ಬಂದಿದೆ.