ದೊಡ್ಡಮಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶ್ರೀ ಚಕ್ರಮಂಡಲ ಪೂಜೆ ಸಂಪನ್ನಕ್ಷೇತ್ರದಲ್ಲಿ ಬೆಳಗ್ಗೆ ದೇವತಾ ಪ್ರಾರ್ಥನೆ, ನಂತರ ಶಾಸ್ತ್ರೋಕ್ತವಾದ ಅರಣಿಮಥನದಿಂದ ಅಗ್ನಿ ಜನನಗೊಳಿಸಿ ಆದ್ಯ ಗಣಪತಿಯಾಗ ನೆರವೇರಿಸಲಾಯಿತು. ಶ್ರೀ ಚಕ್ರಮಂಡಲ ಪೂಜೆಗೆ ವಿಶೇಷವಾಗಿ ರಚಿಸಲಾದ ಪುಷ್ಪಾಲಂಕೃತ ಮಂಟಪದೊಳಗೆ ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ, ಪಂಚವರ್ಣಾತ್ಮಕವಾಗಿ ಬಿಂದುವನ್ನು ಇಟ್ಟು ಶ್ರೀ ಚಕ್ರಮಂಡಲ ರಚನೆಗೆ ಚಾಲನೆ ನೀಡಿದರು.