ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ತೊಂದರೆ: ಎಸ್ಪಿಗೆ ಮನವಿಏ.26ರಂದು ಉಡುಪಿ -ಚಿಕ್ಕಮಗಳೂರು ಮತ್ತು ಮೇ 7ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಸಂದರ್ಭದಲ್ಲಿ, ಸೆಲೆಬ್ರೆಟಿಗಳು ಮತದಾನ ಮಾಡುವುದನ್ನು, ಚುನಾವಣಾ ಆಯೋಗದ ಅಧಿಕೃತ ಪಾಸ್ ಇರುವ ಕ್ಯಾಮೆರಾಮೆನ್‌ಗಳು ಹಾಗೂ ಫೋಟೋಗ್ರಫರ್‌ಗಳು ಚಿತ್ರೀಕರಣ ಮಾಡುವಾಗ ಪೊಲೀಸ್ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಇದರಿಂದ ಮಾಧ್ಯಮದವರ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.