ಪರಿಷತ್ ಚುನಾವಣೆಗೆ ‘ಗ್ಯಾರಂಟಿ’ ಸಹಾಯ: ಮಧು ಬಂಗಾರಪ್ಪಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಲ್ಲ 6 ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಹೇಳಿದ್ದಾರೆ. ಅದರಂತೆ ತಯಾರಿಗಳನ್ನು ನಡೆಸಿದ್ದೇವೆ. ನೈರುತ್ಯ ಕ್ಷೇತ್ರದಲ್ಲಿ ಸುಮಾರು 74,000 ಪದವೀಧರ ಮತ್ತು 24,000 ಶಿಕ್ಷಕ ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ ಮತ್ತು ಡಾ.ಕೆ.ಕೆ.ಮಂಜುನಾಥ್ ಗೆಲ್ಲಿದ್ದಾರೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.