ಅನುದಾನಿತ ಶಾಲೆ ಮುಚ್ಚಲು ಸರ್ಕಾರದ ಹುನ್ನಾರ: ಎಸ್.ಎಲ್. ಭೋಜೇಗೌಡಹಿಂದೆ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಕೆ.ಪಿ.ಎಸ್. ಶಾಲೆಗಳು, ಮೊರಾರ್ಜಿ ಮತ್ತು ಅಂಬೇಡ್ಕರ್ ವಸತಿ ಶಾಲೆಗಳನ್ನು ತೆರೆಯಲಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರದ ಶಿಕ್ಷಣದ ತಪ್ಪು ನೀತಿಗಳಿಂದ ಸಾವಿರಾರು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಭೋಜೇಗೌಡ ಆರೋಪಿಸಿದರು.