ಸಕಾಲದಲ್ಲಿ ಅರ್ಜಿ ಇತ್ಯರ್ಥಕ್ಕೆ ಹೆಚ್ಚುವರಿ ಬಗರ್‌ಹುಕುಂ ಸಮಿತಿ ರಚನೆ: ಗೋಪಾಲ ಪೂಜಾರಿಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈಗಾಗಲೇ ಅಂದಾಜು 32,000 ಬಗರ್ ಹುಕುಂ ಅರ್ಜಿಗಳು ಬಾಕಿ ಇದ್ದು ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಕಾನೂನು ಚೌಕಟ್ಟಿನ ಅಡಿಯಲ್ಲಿ ಹೆಚ್ಚುವರಿಯಾಗಿ ನನ್ನ ಅಧ್ಯಕ್ಷತೆಯಲ್ಲಿ ಇನ್ನೊಂದು ಬಗರ್ ಹುಕುಂ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ರಚನೆಯಾಗಿರುವ ಶಾಸಕರ ನೇತೃತ್ವದ ಸಮಿತಿಯ ಯಾವುದೇ ಕಾರ್ಯಕಲಾಪಕ್ಕೂ ಇದು ತೊಡಕಾಗುವುದಿಲ್ಲ