ಮಲ್ಪೆ-ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಸಂಚಾರ ದುಸ್ತರಹೆಬ್ರಿಯಿಂದ-ಹಿರಿಯಡ್ಕ- ಅತ್ರಾಡಿ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣು ಹಾಕಿ ರಸ್ತೆಯನ್ನು ಏರಿಸಲಾಗುತಿದ್ದು, ಅಕಾಲಿಕ ಮಳೆಗೆ ರಸ್ತೆಯು ಕೆಸರು ಗದ್ದೆಯಂತಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆ ಸಮೀಪ, ಪೆರ್ಡೂರು ಸೇರಿದಂತೆ ಒಟ್ಟು 5ಕ್ಕೂ ಹೆಚ್ಚು ಕಡೆಗಳಲ್ಲಿ ವಾಹನಗಳು ಸಾಗಲು ಪ್ರಯಾಸದಾಯಕವಾಗಿದೆ.