ಕಬ್ಬು ಬೆಳೆಗಾರರ ಕಲ್ಪವೃಕ್ಷ ಭೀಮಾಶಂಕರ ಕಾರ್ಖಾನೆಅನ್ನದಾತರ ಬಾಳಿಗೆ ಕಲ್ಪವೃಕ್ಷವಾಗಲೆಂದು 1983ರಲ್ಲಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಲಾಗಿತ್ತು. ಆದರೆ, ಜನ್ಮತಳಿಯುವ ಮುನ್ನವೇ ಕಾರ್ಖಾನೆ ಆರಂಭ ನೆಲಕಚ್ಚಿ, ಕಾರ್ಖಾನೆಯು ಅಸ್ತಿಪಂಚರ ಬಾರಾಕಮಾನದಂತೆ ನಿಂತುಕೊಂಡಿತು.ಪ್ರತಿ ಚುನಾವಣೆಯಲ್ಲಿ ಕಾರ್ಖಾನೆ ಆಹಾರವಸ್ತುವಾಗಿ ಬಳಕೆಯಾಯಿತೇ ಹೊರತು ರೈತರ ಬಾಳಿಗೆ ಸಿಹಿ ನೀಡುವ ಕಾರ್ಖಾನೆಯಾಗಿ ರೂಪುಗೊಳ್ಳಲೇ ಇಲ್ಲ.