ಬಹಿರ್ದೆಸೆಯೇ ಗತಿ, ವಸತಿ ನಿಲಯದ ಆವರಣವೇ ಸ್ನಾನಗೃಹವಸತಿ ನಿಲಯಗಳಲ್ಲಿ ಸ್ನಾನಗೃಹಗಳು ಇಲ್ಲ, ಶೌಚಾಲಯಗಳಂತೂ ಮೊದಲೇ ಇಲ್ಲ. ಬಯಲು ಬಹಿರ್ದೆಸೆಯಲ್ಲಿಯೇ ನಿತ್ಯ ಶೌಚ, ವಸತಿ ನಿಲಯದ ಆವರಣವೇ ಸ್ನಾನಗೃಹ. ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅಧೀನದಲ್ಲಿ ನಡೆಯುತ್ತಿರುವ ಸುಮಾರು 19 ವಸತಿ ನಿಲಯಗಳ ಪೈಕಿ ಶೇ.90 ರಷ್ಟು ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.