ಪಂಪ್‌ಸೆಟ್ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತರುರೈತರ ಪಂಪ್‌ಸೆಟ್ ಕಳ್ಳತನ ಮಾಡುತ್ತಿದ್ದ ತಂಡದ ಓರ್ವ ಸದಸ್ಯನನ್ನು ಮಧ್ಯರಾತ್ರಿ ರೈತರೆ ಹಿಡಿದು, ಕಟ್ಟಿಹಾಕಿ ಬೆಳಿಗ್ಗೆ ಪೊಲೀಸರಿಗೆ ಒಪ್ಪಿಸಿದ ಘಟನೆ ಮುದ್ದೇಬಿಹಾಳ ತಾಲೂಕಿನ ಅಡವಿಹುಲಗಬಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಅಡವಿ ಹುಲಗಬಾಳ ಕೆರೆ, ಜಮೀನುಗಳಲ್ಲಿನ ಕೊಳವೆ ಬಾವಿ, ತೆರೆದ ಬಾವಿ ಮುಂತಾದವುಗಳಿಗೆ ಪಂಪ್‌ಸೆಟ್ ಅಳವಡಿಸಿದ್ದಾರೆ. ಮೇಲಿಂದ ಮೇಲೆ ಪಂಪ್‌ಸೆಟ್ ಕಳ್ಳತನವಾಗುತ್ತಿದ್ದವು. ಆದರೆ ಕಳ್ಳರು ಸಿಕ್ಕಿಬಿದ್ದಿರಲಿಲ್ಲ.