ರಮೇಶ ಜಿಗಜಿಣಗಿ ಬಂಜಾರ ಸಮಾಜದ ಕ್ಷಮೆ ಕೇಳಲಿಇಂಡಿ: ನನಗೆ ಬಂಜಾರ ಸಮುದಾಯದ ಮತ ಬೇಡ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಬಂಜಾರ ವಿರೋಧಿ ಎಂಬುದನ್ನು ಸಾಬೀತು ಮಾಡಿದ್ದು, ಬಂಜಾರ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಈ ಬಾರಿ ಬಿಜೆಪಿ ವಿರೋಧಿಸಬೇಕು. ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಚವ್ಹಾಣ್ ಹೇಳಿದರು.