ಆರೋಗ್ಯವಂತರಾಗಿ ಬಾಳುವತ್ತ ಗಮನ ಕೊಡಿಕನ್ನಡಪ್ರಭ ವಾರ್ತೆ ತಾಳಿಕೋಟೆ ಮನುಷ್ಯನಿಗೆ ಎಷ್ಟೋ ಕೋಟಿ ಹಣ, ಆಸ್ತಿ, ಎಲ್ಲ ಸಂಪತ್ತು ಇರಬಹುದು, ಆದರೆ ಆರೋಗ್ಯ ಸಂಪತ್ತು ಕೆಟ್ಟು ಹೋದರೆ ಎಲ್ಲ ಸಂಪತ್ತು ಇದ್ದರೂ ವ್ಯರ್ಥವಾಗುತ್ತದೆ. ಹೀಗಾಗಿ ಮೊದಲು ಆರೋಗ್ಯವಂತರಾಗಿ ಬಾಳುವ ಕಡೆಗೆ ಎಲ್ಲರೂ ಗಮನ ನೀಡಬೇಕಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.