ಪ್ರವಾಸಿ ಮಂದಿರದಲ್ಲಿ ರೈತರ ಪ್ರತಿಭಟನೆಕನ್ನಡಪ್ರಭ ವಾರ್ತೆ ವಿಜಯಪುರ ಕಬ್ಬಿಗೆ ಬೆಂಬಲ ಬೆಲೆ, ಎಪಿಎಂಸಿಗಳಲ್ಲಿ ರೈತರ ಸಮಸ್ಯೆಗಳು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ರೈತಸಂಘ, ಹಸಿರುಸೇನೆ ಹಾಗೂ ಏಕೀಕರಣ ಸಮಿತಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಮನೆಮುಂದೆ ಧರಣಿ ಮಾಡಲು ನಿರ್ಧರಿಸಿದ್ದರು. ಆದರೆ, ಸಚಿವ ಶಿವಾನಂದ ಪಾಟೀಲರು ರೈತರೊಂದಿಗೆ ಸಭೆ ಮಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ನೂತನ ಪ್ರವಾಸಿ ಮಂದಿರದಲ್ಲೇ ಊಟ ತಯಾರಿಸಿ ಪ್ರತಿಭಟನೆ ನಡೆಸಲಾಯಿತು.