ಪುಟ...2ಕ್ಕೆಮುಂದುವರಿದ ಅಹೋರಾತ್ರಿ ಧರಣಿ ಸತ್ಯಾಗ್ರಹಕನ್ನಡಪ್ರಭ ವಾರ್ತೆ ವಿಜಯಪುರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಹೊರಗುತ್ತಿಗೆ ನೌಕರರು ಕಡಿಮೆ ಸಂಬಳದಲ್ಲಿ ಜೀವನ ನಡೆಸುತ್ತಿದ್ದಾರೆ, ದೊರಕುತ್ತಿರುವ ವೇತನ ಅತ್ಯಲ್ಪವಾಗಿದೆ, ಇನ್ನೂ ಅನೇಕ ನೌಕರರು ಅನೇಕ ದಶಕಗಳಿಂದ ಸೇವೆ ಸಲ್ಲಿಸಿದರೂ ಸೇವಾ ಭದ್ರತೆ ಇಲ್ಲ, ಹೊರಗುತ್ತಿಗೆ ನೌಕರರ ಜಾಗಕ್ಕೆ ಖಾಯಂ ನೌಕರರು ವರ್ಗಾವಣೆಯಾದರೆ ಇವರ ಕೆಲಸಕ್ಕೆ ಕತ್ತರಿ ಬೀಳುವ ಅನೇಕ ಪ್ರಸಂಗಗಳು ನಡೆದಿವೆ ಎಂದು ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಅನೇಕ ಮುಖಂಡರು ತಮ್ಮ ವಿಚಾರ ವ್ಯಕ್ತಪಡಿಸಿದರು.