ಗ್ರಾಮದಲ್ಲೂ ಕನ್ನಡ ಪಸರಿಸಲು ಸಕಲ ವ್ಯವಸ್ಥೆಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ತಾಲೂಕಕು ಸಮ್ಮೇಳನದ ಲಾಂಛನದಲ್ಲಿ ಮುದ್ದೇಬಿಹಾಳ ತಾಲೂಕಿನ ಐತಿಹಾಸಿಕ, ನಾಲತವಾಡ ಶರಣರಾದ ಶ್ರೀವೀರೇಶ್ವರ ಶ್ರೀಗಳ, ಪ್ರಮುಖ ಬೆಳೆಗಳಾದ ಗೋಧಿ, ಜೋಳ, ಕಬ್ಬು, ಸೂರ್ಯಕಾಂತಿ, ಸಜ್ಜೆ, ಕಡಲೆ, ತೊಗರಿ ಸೇರಿದಂತೆ ತಂಗಡಗಿಯ ನೀಲಾಂಬಿಕೆ ದೇವಸ್ಥಾನ ಹೀಗೆ ಐತಿಹಾಸಿಕ ವಿಶೇಷಗಳನ್ನು ಒಳಗೊಂಡ ಲಾಂಛನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.