ನೈಜ ಬಡವರಿಗೆ ಆಶ್ರಯ ಮನೆ ತಲುಪಿಸಿಕನ್ನಡಪ್ರಭ ವಾರ್ತೆ ನಾಲತವಾಡ ನಿರ್ಗತಿಕರಿಗೆ ಆಶ್ರಯ ಮನೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಆಶ್ರಯ ಮನೆಗಳನ್ನು ನೀಡುತ್ತದೆ. ಈ ಕಾರ್ಯಕ್ರಮವನ್ನು ಯಶಸ್ವಿ ಮಾಡುವುದು ಗ್ರಾಪಂ ಸದಸ್ಯರ ಕೈಯಲ್ಲಿದೆ, ನೈಜ ನಿರ್ಗತಿಕರಿಗೆ ಯೋಜನೆಗಳ ಲಾಭ ತಲುಪಿಸಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.