ಬತ್ತಿದ ಕೆರೆಗಳಲ್ಲೀಗ ಜಲದ ಜೀವಕಳೆಕನ್ನಡಪ್ರಭ ವಾರ್ತೆ ಇಂಡಿ ಜಿಲ್ಲೆಯ ಗಡಿಭಾಗದಲ್ಲಿ ಕೆರೆಗಳು ತುಂಬಿಕೊಂಡಿವೆ. ಹೀಗಾಗಿ, ಇದೀಗ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಇದರಿಂದ ಜನರಲ್ಲಿ ಹರ್ಷ ಮೂಡಿದ್ದು, ಕೆರೆಗಳು ಈ ಬಾರಿ ಭರ್ತಿಯಾಗಿದ್ದೇ ವಿಶೇಷ. ತೀರಾ ಇತ್ತೀಚಿನವರೆಗೂ ಕೆರೆಗಳು ನೀರಿಲ್ಲದೇ ಭಣಗುಡುತ್ತಿದ್ದವು. ಜನ, ಜಾನುವಾರುಗಳು ಸಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿತ್ತು. ಸಾರ್ವಜನಿಕರು ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕು ಎನ್ನುವಷ್ಟರಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಹಾಗೂ ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮುತುವರ್ಜಿ ವಹಿಸಿ ಇಂಡಿ ಹಾಗೂ ಚಡಚಣ ಭಾಗದ ಕೆರೆಗಳನ್ನು ತುಂಬಿಸಿದ್ದಾರೆ.