ಪಿಎಲ್ಡಿ ಬ್ಯಾಂಕ್ಗೆ ಈರಣ್ಣ ಪಟ್ಟಣಶೆಟ್ಟಿ ಪುನರಾಯ್ಕೆಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಐದು ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರದ ಈರಣ್ಣ ಪಟ್ಟಣಶೆಟ್ಟಿ(೪೯ಮತ), ಸಾತಿಹಾಳ ಸಾಲಗಾರ ಪರಿಶಿಷ್ಟ ಪಂಗಡ ಭಾಗ-೫ ಕ್ಷೇತ್ರದ ಅಯ್ಯಪ್ಪ ನಂದಿಹಾಳ(೨೩ಮತ), ಯಾಳವಾರ ಸಾಲಗಾರ ಸಾಮಾನ್ಯ ಭಾಗ-೬ ಕ್ಷೇತ್ರದ ಸಾಹೇಬಗೌಡ ಉತ್ನಾಳ(೧೩ಮತ), ಹೂವಿನಹಿಪ್ಪರಗಿ ಸಾಲಗಾರ ಸಾಮಾನ್ಯ ಭಾಗ-೩ ಕ್ಷೇತ್ರದ ಗಿರೀಶ ಚಿಮ್ಮಲಗಿ(೨೬ಮತ), ಕುದರಿಸಾಲವಾಡಗಿ ಸಾಲಗಾರ ಮಹಿಳಾ ಭಾಗ-೪ ಕ್ಷೇತ್ರದಿಂದ ಶಂಕ್ರೆಮ್ಮ ಗೌಡರ(೧೮ಮತ)ಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.