ಸುಲಿಗೆ ಕೇಂದ್ರಗಳಾದ ಆಧಾರ್ ಸೇವಾ ಕೇಂದ್ರಗಳುಕನ್ನಡಪ್ರಭ ವಾರ್ತೆ ಇಂಡಿ ಆಧಾರ್ ಕಾರ್ಡ್ ನೋಂದಣಿ, ಆಧಾರ್ ಕಾರ್ಡ್ ತಿದ್ದುಪಡಿಗಳು ಹೀಗೆ ಯಾವುದೇ ಸಣ್ಣ ತಿದ್ದುಪಡಿಗಳಿದ್ದರೂ ಜನ ಸಾಮಾನ್ಯರು ಸರಿ ಮಾಡಿಸಲೇಬೇಕು. ಅದಕ್ಕಾಗಿ ಆಧಾರ್ ಕೇಂದ್ರಕ್ಕೆ ಹೋಗಲೇಬೇಕು. ಅಷ್ಟೆ ಅಲ್ಲದೇ, ಇಲ್ಲಿ ಆಪರೇಟರ್ ಸಿಬ್ಬಂದಿಗೆ ಹೆಚ್ಚಿನ ಹಣ ನೀಡಿದರೆ ಮಾತ್ರ ಕೆಲಸವಾಗುತ್ತದೆ. ಇಲ್ಲದಿದ್ದರೆ ಅಲ್ಲಿ ಕಾದು ಕಾದು ಸುಸ್ತಾಗಬೇಕಷ್ಟೆ.