ನುಡಿದಂತೆ ನಡೆದ ಸಂತನಿಗೆ ಗುರುನಮನಕನ್ನಡಪ್ರಭ ವಾರ್ತೆ ವಿಜಯಪುರ ನಡೆದಾಡುವ ದೇವರು, ಶತಮಾನದ ಸಂತ, ಜ್ಞಾನಯೋಗಿ, ನುಡಿದಂತೆ ನಡೆದ ಆಧ್ಯಾತ್ಮಿ ಎಂದೆಲ್ಲ ಕರೆಯಿಸಿಕೊಂಡವರು ಇವರು. ಕಾವಿ ಹಾಕದೆ, ಕಿಸೆ (ಜೇಬು) ಇಲ್ಲದ ಅಂಗಿ ಧರಿಸಿ, ಪ್ರಶಸ್ತಿ, ಪುರಸ್ಕಾರ, ಹಣಕ್ಕಿಂತ ಜ್ಞಾನ ಮುಖ್ಯ ಎಂದು ಸಾರಿದಾತ. ನನಗೆ ಸ್ಮಾರಕ ಬೇಡ, ಪೂಜೆ ಬೇಡ, ನನ್ನನ್ನು ಪುಸ್ತಕದಲ್ಲಿ, ಪ್ರಕೃತಿಯಲ್ಲಿ ಕಾಣಿ ಎಂದವರು. ಇಂತಹ ಜ್ಞಾನದಾಸೋಹಿ ತಮ್ಮ 82ನೇ ವರ್ಷಕ್ಕೆ ಪ್ರಕೃತಿಯಲ್ಲಿ ಲೀನವಾಗಿ ಎರಡು ವರ್ಷಗಳು ಕಳೆಯುತ್ತಿವೆ.