ಜೋಳ ತಿಂದವನು ತೋಳದಂತೆ ಬಲಿಷ್ಠ ಸತ್ಯಕನ್ನಡಪ್ರಭ ವಾರ್ತೆ ವಿಜಯಪುರ ಜೋಳ ತಿಂದವನು ತೋಳದಂತೆ ಬಲಿಷ್ಠನಾಗುತ್ತಾನೆ ಎಂಬ ಗಾದೆ ಸತ್ಯ ಎಂದು ಅಖಿಲ ಭಾರತ ಜೋಳ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಆರ್.ಮಧುಸೂಧನ ಹೇಳಿದರು. ನಿಡಗುಂದಿ ತಾಲೂಕಿನ ಉಣ್ಣಿಭಾವಿ ಗ್ರಾಮದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಜೋಳ ಅಬಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಪ್ರದೇಶಗಳಲ್ಲಿ ಸಿರಿಧಾನ್ಯ ತಂತ್ರಜ್ಞಾನಗಳ ಪ್ರಚಾರ ಹಾಗೂ ಅಳವಡಿಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೋಳದಲ್ಲಿ ಅನೇಕ ಉತ್ತಮ ಪೋಷಕಾಂಶಗಳಿವೆ, ಶಕ್ತಿವರ್ಧಕವಾಗಿದೆ, ತೋಳವನ್ನು ದೊಡ್ಡ ದೊಡ್ಡ ಕಾಡು ಪ್ರಾಣಿಗಳು ಸಹ ಬೇಟೆಯಾಡಲು ಹೆದರುತ್ತವೆ.