ಬಸವನಾಡಿನ ಯುವಕನಿಗೆ 6 ಚಿನ್ನದ ಪದಕಕನ್ನಡಪ್ರಭ ವಾರ್ತೆ ವಿಜಯಪುರ: ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಈ ಬಾರಿ ಸಾಧನೆಗೈದ 7 ಜನರಿಗೆ 18 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಉಳಿದಂತೆ ಪಿಹೆಚ್ಡಿಯಲ್ಲಿ 5, ಎಂಸಿಹೆಚ್ ನಲ್ಲಿ 1, ಎಫ್ಪಿಡಿ ನಲ್ಲಿ 2, ಎಫ್ಯುಜಿವೈನಲ್ಲಿ 1, ಪಿಜಿನಲ್ಲಿ 16, ಎಂಎಸ್ಸಿ ಮೆಡಿಕಲ್ ಕೋರ್ಸ್ನಲ್ಲಿ 6, ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಷನ್ ನಲ್ಲಿ 2, ಎಂಬಿಬಿಎಸ್ನಲ್ಲಿ 165, ಹಾಗೂ ಯುಜಿನಲ್ಲಿ ಇಬ್ಬರಿಗೆ ಪದವಿ ಪ್ರದಾನ ಮಾಡಲಾಯಿತು.