ಇಂಡಿ ತಾಲೂಕು ಅಭಿವೃದ್ಧಿಗೆ ಬೇಕು ಗಮನಕನ್ನಡಪ್ರಭ ವಾರ್ತೆ,ಇಂಡಿ ಗಡಿ ಭಾಗದ ಇಂಡಿ ತಾಲೂಕು ಮೊದಲೇ ಬರದ ನಾಡು, ಜಿಲ್ಲೆಯಲ್ಲಿಯೇ ಹೆಚ್ಚು ಲಿಂಬೆ ಬೆಳೆಯುವ ಪ್ರದೇಶ. ಪ್ರಮುಖ ಬೆಳೆಯಾಗಿರುವ ಲಿಂಬೆಯನ್ನು ಉಳಿಸಿಕೊಳ್ಳಲು ತಾಲೂಕಿನ ಬೆಳೆಗಾರರು ನಿರಂತರವಾಗಿ ಪರದಾಟ ನಡೆಸಿದ್ದಾರೆ. ಪ್ರತಿ ವರ್ಷವೂ ಬಜೆಟ್‌ನಲ್ಲಿ ಯೋಜನೆಗಳು ಕಾರ್ಯಗತವಾಗಬಹುದು ಎಂದು ಕಾಯುವುದೇ ತಾಲ್ಲೂಕಿನ ಜನರ ಪರಿಪಾಠವಾದಂತಾಗಿದೆ. ಇಂಡಿ ತಾಲೂಕಿಗೆ ನಂಜುಂಡಪ್ಪ ವರದಿ ಪ್ರಕಾರ ಉನ್ನತ ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆ ಸಿಗದಿರುವುದು ವಿಪರ್ಯಾಸ.