ಸೌಹಾರ್ದಯುತ ಬಾಳು ವಿಶ್ವಾರಾಧ್ಯರ ಆಶಯವಾಗಿತ್ತು - ಡಾ. ಗಂಗಾಧರ ಶ್ರೀಜಾತಿ-ಮತ, ಪಂಥ-ಪಂಗಡಗಳನ್ನು ಮೀರಿ ಮಾನವತೆಯ ನೆಲೆಗಟ್ಟಿನಲ್ಲಿ ಎಲ್ಲರೂ ಸೌಹಾರ್ದಭಾವದಿಂದ ಬಾಳಿ ಬದುಕಬೇಕು ಎಂಬುದು ಶ್ರೀ ವಿಶ್ವಾರಾಧ್ಯರ ಆಶಯವಾಗಿತ್ತು. ಅದರಂತೆಯೇ ಅಬ್ಬೆತುಮಕೂರಿನ ಮಠದಲ್ಲಿ ಜಾತ್ಯಾತೀತ ಭಾವವನ್ನು ಕಾಪಾಡಿಕೊಂಡು ಬಂದಲಾಗುತ್ತಿದ್ದು, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಲಾಗುತ್ತಿದೆ ಎಂದು ಸುಕ್ಷೇತ್ರ ಅಬ್ಬೆತುಮಕೂರು ಶ್ರೀವಿಶ್ವಾರಾಧ್ಯರ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.