ವಾಲ್ಮೀಕಿ ನಿಗಮ ಹಗರಣಕ್ಕೆ ಪರಿಷತ್ ಕಲಾಪ ಬಲಿವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ ಸದ್ದು ಮಂಗಳವಾರವೂ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿತು. ಮುಖ್ಯಮಂತ್ರಿಯವರ ತಲೆದಂಡಕ್ಕೆ ಆಗ್ರಹ ಮತ್ತು ನೆಕ್ಕುಂಟಿ ನಾಗರಾಜ್ ಫೋಟೋ ಪೋಸ್ಟರ್ ವಿಚಾರ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕಲಾಪ ಮುಂದೂಡಿಕೆಯಾಯಿತು.