ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಮತ್ತು ವಿಪಕ್ಷಗಳ ನಡುವೆ ಹಲವು ಸಮಯದಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ಮತ್ತೊಂದು ಹಂತ ತಲುಪಿದ್ದು, ಧನಕರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರುವ ನಿರ್ಣಯ ಮಂಡನೆಗೆ ಅವಕಾಶ ಕೋರಲು ವಿಪಕ್ಷಗಳು ಮುಂದಾಗಿವೆ.
ರಾಜ್ಯಸಭೆಯ ಉಪಸಭಾಪತಿ ಜಗದೀಪ್ ಧನಕರ್ ಹಾಗೂ ಚಿತ್ರನಟಿ- ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನಡುವೆ ಸದನದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರ ನಡೆದಿದ್ದು, ಈ ಬಾರಿ ವಿಕೋಪಕ್ಕೆ ಹೋಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಿ.ವೈ. ವಿಜಯೇಂದ್ರ ಕಡತಗಳಿಗೆ ನಕಲಿ ಸಹಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾಗಿರುವ ಸಂಕಷ್ಟ ಮತ್ತಷ್ಟು ಜಟಿಲವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನೇ ಬಂಡೆ, ನಾನೇ ಬಲ. ನಾನು ಎಲ್ಲಾ ಕಾಲಕ್ಕೂ ಮುಖ್ಯಮಂತ್ರಿ ಪರ. ನಾನು ಮಾತ್ರವಲ್ಲ, ನಮ್ಮ ಇಡೀ ಪಕ್ಷವೇ ಮುಖ್ಯಮಂತ್ರಿ ಪರ ಗಟ್ಟಿಯಾಗಿ ನಿಲ್ಲಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿಯಾಗಿ ರಾಜ್ಯದ ಕಾವಲು ಕಾಯಪ್ಪ, ಜನರಿಗೆ ಒಳ್ಳೆಯದು ಮಾಡಪ್ಪ ಅಂದ್ರೆ ಸಿಕ್ಕಿದ್ದನ್ನೆಲ್ಲಾ ದೋಚುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಸೈಟುಗಳನ್ನೆಲ್ಲಾ ನುಂಗಿದ್ದಾರೆ. ಕಾನೂನು ಕಾಪಾಡಬೇಕಾದವರೇ ಕಾನೂನು ಬಾಹೀರವಾಗಿ ನಿವೇಶನಗಳನ್ನು ತಮ್ಮ ಕುಟುಂಬದವರ ಪಾಲಾಗಿಸಿಕೊಂಡಿದ್ದಾರೆ.