ಅದಾನಿ ಸಮೂಹವು ವಿದೇಶಗಳಿಂದ ಆಮದು ಮಾಡಿಕೊಂಡ ಕಡಿಮೆ ಗುಣಮಟ್ಟದ ಕಲ್ಲಿದ್ದಲ್ಲನ್ನು, ‘ಉತ್ಕೃಷ್ಟ ಗುಣಮಟ್ಟದ ಕಲ್ಲಿದ್ದಲು’ ಎಂದು ಬಿಂಬಿಸಿ ಅದಾನಿ ಸಮೂಹ ಸಾವಿರಾರು ಕೋಟಿ ರು. ಲಾಭ ಮಾಡಿಕೊಂಡಿದೆ ಎಂದು ಒಸಿಸಿಆರ್ಪಿ ವರದಿ ಆಧರಿಸಿ ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆ ವರದಿ ಪ್ರಕಟಿಸಿದೆ.
‘ರಾಮಕೃಷ್ಣ ಮಿಷನ್ ಹಾಗೂ ಭಾರತ ಸೇವಾಶ್ರಮ ಸಂಘದಲ್ಲಿರುವ ಕೆಲ ಸಂತರು ಬಿಜೆಪಿ ಪರ, ನವದೆಹಲಿಯಿಂದ ಬರುವ ಆದೇಶಗಳಿಗೆ ಅವರು ಬದ್ಧರಾಗಿರುತ್ತಾರೆ’ ಎಂದಿರುವ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರತ ಸೇವಾಶ್ರಮ ಸಂಘದ ಕಾರ್ತಿಕ್ ಲೀಗಲ್ ನೋಟಿಸ್ ನೀಡಿದ್ದಾರೆ.
ಒಂದೇ ವರ್ಷದಲ್ಲಿ ಆರ್ಥಿಕತೆಯನ್ನು ಹಾಳುಗೆಡವಿ ಜನರ ಜೀವನವನ್ನು ಚಿಂತೆಯ ಪಾತಾಳಕ್ಕೆ ತಳ್ಳಿರುವುದೇ ನುಡಿದಂತೆ ನಡೆದ ಈ ಸರ್ಕಾರದ ಸಾಧನೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾ ಕಾಲಹರಣ ಮಾಡಿ ಒಂದು ವರ್ಷ ಕಳೆದಿದೆ