ತಮ್ಮ ಕಾಲ ಮುಗಿಯಿತೆಂದು ಸಿದ್ದರಾಮಯ್ಯಗೆ ಅರಿವಾಗಿದೆ-ಬಿಎಸ್ವೈಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿ ನನ್ನನ್ನು ಉಳಿಸಿ, ನನಗೆ ಹೆಚ್ಚು ವೋಟ್ ಕೊಡಿ ಎಂದು ಕೇಳಿದ್ದಾರೆ. ಅಂದರೆ, ನನ್ನ ಕಾಲ ಮುಗಿತು. ಬಿಜೆಪಿ ಅವರು ಖುರ್ಚಿಯಲ್ಲಿ ಕೂರುತ್ತಾರೆ ಎಂಬುದು ಅವರ ಅನುಭವಕ್ಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.