ಎಂಎಲ್ಸಿ ಮಧು ಮಾದೇಗೌಡ ತಟಸ್ಥ ನಿಲುವು ನನಗೆ ಗೊತ್ತಿಲ್ಲ: ಶಾಸಕ ರಮೇಶ್ ಬಂಡಿಸಿದ್ದೇಗೌಡಜಿ.ಮಾದೇಗೌಡರು ಶಾಸಕರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ಹಲವು ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಮಧು ಮಾದೇಗೌಡರು, ಜಿ.ಮಾದೇಗೌಡರ ಜೊತೆ ಪಕ್ಷಕ್ಕೆ ದುಡಿದಿದ್ದಾರೆ. ಮದ್ದೂರು ತಾಲೂಕಿನಲ್ಲಿ ಆದ ಕೆಲವು ರಾಜಕೀಯ ಬದಲಾದ ಪರಿಸ್ಥಿತಿಯಿಂದ ಮಧು ಅಣ್ಣರಿಗೆ ಅಪಮಾನ ಹಾಗೂ ಮನಸ್ಸಿಗೆ ನೋವುಂಟಾಗಿರಬಹುದು. ರಾಜ್ಯ ಹಾಗೂ ಜಿಲ್ಲಾ ನಾಯಕರೊಡಗೂಡಿ ಮಧು ಅಣ್ಣರೊಂದಿಗೆ ಜೊತೆ ಕುಳಿತು ಮಾತನಾಡಿ ಅವರ ಸಮಸ್ಯೆ ಅರಿತು ಬಗೆ ಹರಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇವೆ.