ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದ್ದು, 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡು ಜನರು ಪರದಾಡಿದರು. ಮಳೆಯಿಂದಾಗಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಐದು ಜಾನುವಾರುಗಳು ಸಾವನ್ನಪ್ಪಿವೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮಂಗಳವಾರ (ಮೇ 20) ಎರಡು ವರ್ಷ ಪೂರೈಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಹಣ ದುರ್ಬಳಕೆ, ವಕ್ಫ್ ಜಮೀನು ದುರ್ಬಳಕೆ, ಕೆಪಿಎಸ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಎಸ್ಇಪಿ, ಟಿಇಪಿ ಹಣ ದುರ್ಬಳಕೆ ಇವರ ಸಾಧನೆಯೇ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಪ್ರಶ್ನಿಸಿದರು.
ಕಳೆದ ಮೂರು ತಿಂಗಳಲ್ಲಿ ನೀವು ಮಾಡಿದ್ದೇನು ಸಿದ್ದರಾಮಯ್ಯನವರೇ?. ಜನಾರ್ಧನ ರೆಡ್ಡಿಗೂ ನಿಮಗೂ ಯಾವುದೇ ವ್ಯತ್ಯಾಸವಿಲ್ಲ. ಎಲ್ಲಾ ಪಕ್ಷಗಳು ಸೇರಿ ರಾಜ್ಯವನ್ನು ಧೂಳಿಪಟ ಮಾಡುತ್ತಿವೆ - ಎಚ್. ವಿಶ್ವನಾಥ್
‘ಕಾಂಗ್ರೆಸ್ ಸರ್ಕಾರ ಬಂತು ಕರ್ನಾಟಕದ ಅಭಿವೃದ್ಧಿ ತಂತು’
ಜನಸಾಮಾನ್ಯರಿಗೆ ನಿಜವಾದ ಅಚ್ಛೆ ದಿನ್ ತಂದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು । ಅಭಿವೃದ್ಧಿಗೂ ಅನುದಾನ
ಆಗಿದ್ದೇನಪ್ಪ ಅಂದರೆ, ವಿಶ್ವ ಅಸ್ತಮಾ ದಿನದ ಅಂಗವಾಗಿ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜಾಗೃತಿ ಹಾಗೂ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಆದರೆ, ಈ ಜಾಗೃತಿ ಶಿಬಿರಕ್ಕೆ ಗದಗ ಮೂಲದ ಸಂಸ್ಥೆ ಅಧ್ಯಕ್ಷ ಸಂಶಿಮಠ, ವೈದ್ಯ ಗೋವಿಂದ ದೇಸಾಯಿ ಹಾಗೂ ಮಾಧ್ಯಮದ ಒಬ್ಬ ಪ್ರತಿನಿಧಿ ಮಾತ್ರ ಬಂದಿದ್ದರು.
ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದ್ದರ ಪರಿಣಾಮ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಯ ನೂರಾರು ಫಲಾನುಭವಿಗಳು ನೀರು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕವಿಲ್ಲದ ಫ್ಲ್ಯಾಟ್ಗಳನ್ನು ಪ್ರವೇಶಿಸಲಾಗದೆ ಪರದಾಡುವಂತಾಗಿದೆ.
ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಮರಗಳನ್ನು ಕತ್ತರಿಸಲು ಮುಂದಾಗಿರುವುದನ್ನು ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯವರು ಸ್ಥಳಕ್ಕೆ ಭೇಟಿ ನೀಡಿ ‘ಪರಿಸರ ವ್ಯವಸ್ಥೆ’ ಪರಿಶೀಲಿಸಿದರು.