ಆಸ್ತಿ ಮಾಲೀಕರೆ ಗಮನಿಸಿ, ದುಪ್ಪಟ್ಟು ದಂಡ ತಪ್ಪಿಸಿ : ಆಸ್ತಿ ತೆರಿಗೆ ಬಾಕಿಗೆ ಏ.1ರಿಂದ ಶೇ.100 ದಂಡರಾಜಧಾನಿಯಲ್ಲಿರುವ ಆಸ್ತಿ ಮಾಲೀಕರೇ ನೀವೇನಾದರೂ ನಿಮ್ಮ ಆಸ್ತಿಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದೀರಾ, ಹಾಗಾದರೆ, ಮಾ.31ರೊಳಗೆ ಪಾವತಿಸಿ. ಇಲ್ಲವಾದರೇ ಏ.1 ರಿಂದ ಬಾಕಿ ಇರುವ ಆಸ್ತಿ ತೆರಿಗೆ ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ದಂಡ ರೂಪದಲ್ಲಿ ಪಾವತಿಸಬೇಕಾಗಲಿದೆ.