₹31000 ವೇತನಕ್ಕಾಗಿ ಗ್ರಾ.ಪಂ ನೌಕರರ ಧರಣಿ : 23 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗ್ರಾಮ ಪಂಚಾಯಿತಿ ನೌಕರರಿಗೆ ₹31,000 ಕನಿಷ್ಠ ವೇತನ ಹಾಗೂ ₹6,000 ಪಿಂಚಣಿ ನಿಗದಿಪಡಿಸಬೇಕು ಎಂಬುದು ಸೇರಿ ವಿವಿಧ 23 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಹಗಲು-ರಾತ್ರಿ ಧರಣಿ’ ಆರಂಭವಾಗಿದೆ.