ಹೊಸ ವರ್ಷಾಚರಣೆ ಸಿದ್ಧತೆಗೆ ಬಿಬಿಎಂಪಿ ₹25 ಲಕ್ಷಕ್ಕೂ ಅಧಿಕ ವೆಚ್ಚ : ಅಧಿಕಾರಿಗಳು ಮಾಹಿತಿಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾರಿಕೇಟ್ ಅಳವಡಿಕೆ ಸೇರಿದಂತೆ ಮೊದಲಾದ ಸಿದ್ಧತೆಗೆ ಬಿಬಿಎಂಪಿ ವತಿಯಿಂದ ಬರೋಬ್ಬರಿ 25 ಲಕ್ಷ ರು.ಗೂ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ.