ರಾಜ್ಯದಲ್ಲಿ ಈ ಬಾರಿ ಮಾವು ಉತ್ತಮ ಇಳುವರಿ : 10 ಲಕ್ಷ ಮೆಟ್ರಿಕ್ ಟನ್ ಮಾವು ಇಳುವರಿ ನಿರೀಕ್ಷೆಮೂರ್ನಾಲ್ಕು ವರ್ಷಗಳಿಂದ ಬದಲಾದ ವಾತಾವರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರು ಈ ಬಾರಿ ಕೊಂಚ ಖುಷಿಯಾಗಿದ್ದಾರೆ. ಜಿಗಿಹುಳು ಉಪಟಳವೂ ಕಡಿಮೆಯಿದ್ದು, ಮರಗಳಲ್ಲಿ ಭರ್ಜರಿ ಹೂವು ಬಿಟ್ಟು ಕಾಯಿಕಟ್ಟಲು ಆರಂಭಿಸಿರುವುದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.