ಭಾರತವು ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪೂಜ್ಯ ಭಗವಾನ್ ಬಿರ್ಸಾ ಮುಂಡಾ ಅವರ ಪರಂಪರೆಯನ್ನು ಆಚರಿಸಲು ಮೀಸಲಾಗಿರುವ ಜನ ಜಾತಿಯ ಗೌರವ ದಿನವನ್ನು ನ.15ರಂದು ಪ್ರತಿ ವರ್ಷ ಆಚರಿಸುತ್ತದೆ.
ಹಲವು ದಶಕಗಳ ಕಾಲ ಹುಟ್ಟಿ ಬೆಳೆದ ಮನೆ, ಬಿತ್ತಿದ ಭೂಮಿ, ಮಠ, ಮಂದಿರದ ಜಾಗವನ್ನು ಇದ್ದಕ್ಕಿದ್ದಂತೆ ತನ್ನದೆನ್ನುವ ವಕ್ಫ್ ಮಂಡಳಿ ವಾದ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿಲ್ಲ, ಹಿಂದುಗಳು ಮಾತ್ರ ಆತಂಕಗೊಂಡಿಲ್ಲ. ನೆರೆಯ ಕೇರಳ ರಾಜ್ಯದಲ್ಲಿರುವ ಬಡ ಕ್ರಿಶ್ಚಿಯನ್ ಕುಟುಂಬಗಳಿಗೂ ಈ ಬಿಸಿ ತಟ್ಟಿದೆ.
ಸಿಹಿ ನೀರಿನಲ್ಲಿ ಕಪ್ಪೆಚಿಪ್ಪು ಬಿಟ್ಟು ತಯಾರಿಸುವ ‘ಮುತ್ತು ಕೃಷಿ’ ಬಗ್ಗೆ ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಜನರು ಮುಗಿಬಿದ್ದು ಮಾಹಿತಿ ಪಡೆಯುತ್ತಿದ್ದುದು ‘ಮುತ್ತಿನ ಗಮ್ಮತ್ತಿ’ಗೆ ಸಾಕ್ಷಿಯಾಗಿತ್ತು.
ಕನ್ನಡಪ್ರಭದಿಂದ ಲಿಟಲ್ ಸ್ಟಾರ್ಸ್ ಎಂಬ ವಿಶೇಷ ಲೇಖನದ ಮೂಲಕ ಮಕ್ಕಳ ಸಾಧನೆ ಬಗ್ಗೆ ತಿಳಿಸಿಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯುವ ವಿಜ್ಞಾನಿ ಬಿ.ವೈ.ಚತುರಶ್ರೀ, ಕರ್ನಾಟಕದ ಟಾಪ್ಸೀಡ್ ಟೆನ್ನಿಸ್ ತಾರೆ ಕಶ್ವಿ ಸುನಿಲ್ ಎಂಬ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.