ಹೊಂಗನೂರು ಗ್ರಾಪಂ ಕಟ್ಟಡ ಅಶುಚಿತ್ವ, ಅನೈತಿಕ ಚಟುವಟಿಕೆ ತಾಣ
Oct 10 2025, 01:00 AM ISTಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ೧೮೫೮ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಹೊಂಗನೂರು ಬೆಲ್ಲವತ್ತ, ಮುರಟಿಪಾಳ್ಯ, ಶನಿವಾರಮುಂಟಿ ಗ್ರಾಮಗಳನ್ನು ಹೊಂಗನೂರು ಪಂಚಾಯಿತಿ ಒಳಗೊಂಡಿದೆ. ಗ್ರಾಮದಿಂದ ಕಳ್ಳೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗ್ರಾಮದ ಹೊರ ಭಾಗದಲ್ಲಿ ಪಂಚಾಯಿತಿ ಕಟ್ಟಡವಿದೆ. ಆದರೆ ಈ ಕಟ್ಟಡ ಸುತ್ತಲೂ ಕಳೆ ಸಸ್ಯಗಳು ಕಾಡಿನಂತೆ ಹಬ್ಬಿವೆ. ಇದರ ಹಂಬುಗಳು ಕಿಟಕಿ ಒಳಗಿಂದ ತೂರಿ ಕಚೇರಿ ಒಳಗೂ ಹಬ್ಬಿದೆ. ಕಟ್ಟಡದ ಹಿಂಭಾಗದಲ್ಲಿ ೨ ಶೌಚಗೃಹವಿದೆ. ಆದರೆ ಇದರ ನಿರ್ವಹಣೆಯಿಲ್ಲದೆ ಇದು ಗಬ್ಬು ನಾರುತ್ತಿದೆ. ಅಲ್ಲದೆ ಇಲ್ಲಿಗೆ ನೀರಿನ ಸಂಪರ್ಕವೂ ಇಲ್ಲ.