ನೆರೆ ಜಿಲ್ಲೆಗಳಿಗೆ ತುಂಗಾನದಿ ನೀರು ಕೊಡಿ: ಎಸ್ಸೆಸ್ಸೆಂ ಒತ್ತಾಯ
Sep 13 2025, 02:04 AM ISTಭದ್ರಾ ಬಲದಂಡೆ ನಾಲೆಯಿಂದ ನೆರೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಿಂದ ದಾವಣಗೆರೆ, ಶಿವಮೊಗ್ಗ, ವಿಜಯನಗರ ಜಿಲ್ಲೆಯ ಅಚ್ಚುಕಟ್ಟು ಕೊನೆ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಬಲದಂಡೆ ನಾಲೆಯಿಂದ ನೀರು ಲಿಫ್ಟ್ ಮಾಡುವ ಬದಲು ತುಂಗಾ ನದಿಯಿಂದಲೇ ನೀರು ಪೂರೈಸುವಂತೆ ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ರೈತರು ಮನವಿ ಅರ್ಪಿಸಿದ್ದಾರೆ.