ನ್ಯಾಯ ಸಿಗೋವರೆಗೂ ಹೋರಾಟ: ಶಿವಲಿಂಗ ಟಿರಕಿ
Oct 09 2025, 02:01 AM ISTನೇಕಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಮತ್ತು ನೇಕಾರ ಸಮ್ಮಾನ ಯೋಜನೆ ಸೌಲಭ್ಯಕ್ಕೆ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಹೇಳಿಕೆ ನೀಡಿದ ಕೆಲವು ಸ್ವಯಂಘೋಷಿತ ನೇಕಾರ ನಾಯಕರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇದುವರೆಗಿನ ಹೋರಾಟಗಳಲ್ಲಿ ರಾಜ್ಯ ನೇಕಾರ ಸೇವಾ ಸಂಘ ನಮ್ಮದೇ ಬಸ್ ಚಾರ್ಜ್ ಹಾಕಿ, ಬುತ್ತಿ ಕಟ್ಟಿಕೊಂಡು ಹುಬ್ಬಳ್ಳಿ, ಬೆಂಗಳೂರು, ದೆಹಲಿಗಳವರೆಗೆ ಪ್ರತಿಭಟನಾ ಹೋರಾಟ ನಡೆಸಿದ್ದೇವೆ. ಅವುಗಳಲ್ಲಿ ಭಾಗಿಯಾದ ಎಲ್ಲ ನೇಕಾರರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.