ವಿವಿಧ ಮಳಿಗೆಗಳ ಹರಾಜಿಗೆ ಸಕಲೇಶಪುರ ಪುರಸಭೆ ತೀರ್ಮಾನ
Dec 10 2024, 12:30 AM ISTಪುರಸಭೆಯ ಕೆಲವು ಕಟ್ಟಡಗಳ ಹರಾಜು ಮಾಡಲು ಪುರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್ಕುಮಾರ್ ಹೇಳಿದರು. ಪುರಸಭಾ ವ್ಯಾಪ್ತಿಯೊಳಗೆ ೧೨ ವರ್ಷ ಅವಧಿ ಮುಗಿದಿರುವ ಮಳಿಗೆಗಳು, ಆಜಾದ್ ರಸ್ತೆಯಲ್ಲಿರುವ ಮೀನು ಹಾಗೂ ಕೋಳಿ ಮಾಂಸದ ಮಳಿಗೆಗಳು ಹಾಗೂ ಹಳೇ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ನೂತನ ಕಟ್ಟಡವನ್ನು ಬಾಡಿಗೆಗಾಗಿ ಹರಾಜು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.