ಖೋ ಖೋ ಪಂದ್ಯದಲ್ಲಿ ಮುದುಡಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
Sep 10 2025, 01:03 AM ISTತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಅಂಗವಾಗಿ ನಡೆದ ಬಾಲಕರ ಖೋ ಖೋ ವಿಭಾಗದಲ್ಲಿ ಗಂಡಸಿ ಹೋಬಳಿಯ ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಶಿಕ್ಷಕರು ಮತ್ತು ಪೋಷಕರಾಗಿ ನಿಂತಿರುವ ಶಿಕ್ಷಕ ವೃಂದ ವಿದ್ಯಾರ್ಥಿಗಳ ಈ ಸಾಧನೆಗೆ ಶ್ಲಾಘಿಸಿದರು. ನಮ್ಮ ಮಕ್ಕಳು ಪಠ್ಯ ವಿಷಯಗಳಲ್ಲಿ ಮಾತ್ರವಲ್ಲ, ಕ್ರೀಡಾ ಕ್ಷೇತ್ರದಲ್ಲಿಯೂ ಮುನ್ನಡೆಸುತ್ತಿದ್ದಾರೆ. ಇದೊಂದು ಸಮಗ್ರ ಶಿಕ್ಷಣದ ಸಾಕ್ಷ್ಯ ಎಂದು ಸಹ ಶಿಕ್ಷಕಿಯೊಬ್ಬರು ಉಲ್ಲೇಖಿಸಿದರು.