ದೇಶದ ನಿಜವಾದ ಆಸ್ತಿ ಮಕ್ಕಳು
Jul 26 2025, 12:00 AM ISTದೇಶದ ನಿಜವಾದ ಆಸ್ತಿ ಮಕ್ಕಳು. ವಿದ್ಯಾರ್ಥಿಗಳು ಮುಂದಿನ ಮಾನವ ಸಂಪನ್ಮೂಲ, ಶಿಕ್ಷಕರು ಪೋಷಕರು ಕಾಳಜಿ ವಹಿಸಿ ಎಂದು ಡೀಸಿ ಲತಾ ಕುಮಾರಿ ತಿಳಿಸಿದರು. ಲೂ ಇನ್ನೂ ಹೆಚ್ಚಿನ ಗಮನವನ್ನು ಒಬ್ಬ ವಿದ್ಯಾರ್ಥಿಯು ಅನುತ್ತೀರ್ಣನಾಗಬಾರದು ಎಂಬ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ಪೋಷಕರಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮನೆಯಲ್ಲಿ ಮಕ್ಕಳ ಎದುರುಗಡೆ ಕೆಟ್ಟ ಪದಗಳನ್ನು ಬಳಸಬಾರದು. ಮನೆಯ ವಾತಾವರಣ ಪ್ರಶಾಂತವಾಗಿ, ಸಂತಸಮಯವಾಗಿ ಇರಬೇಕು, ಟಿವಿ, ಮೊಬೈಲ್ ಮೊದಲಾದವನ್ನು ಪೋಷಕರು ತ್ಯಾಗ ಮಾಡಬೇಕಾಗುತ್ತದೆ. ತಂದೆತಾಯಿಗಳ ಈ ತ್ಯಾಗದಿಂದ ಮಕ್ಕಳು ಒಂದು ಉತ್ತಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.