ಪಕ್ಷ ಭೇದ ಮರೆತು ನಾಯಕ ಸಮುದಾಯ ಸಂಘಟಿತವಾಗಬೇಕು: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ
Nov 26 2024, 12:51 AM ISTರಾಜಕೀಯ ಸಂದರ್ಭದಲ್ಲಿ ರಾಜಕಾರಣ ಮಾಡಿ, ರಾಜಕೀಯ ಮುಗಿದ ನಂತರ ಪಕ್ಷ ಭೇದ ಭಾವ ಮರೆತು ನೀವೆಲ್ಲರೂ ಅಣ್ಣ ತಮ್ಮಂದಿರಾಗಿ ನಮ್ಮ ನಾಯಕ ಸಮುದಾಯದ ಮುಖಂಡರು ಸಮುದಾಯದ ಪರವಾಗಿ ಸಂಘಟಿತರಾಗಬೇಕು ಎಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು. ಹನೂರಿನಲ್ಲಿ ಶ್ರೀಮಠದ 27 ನೇ ವಾರ್ಷಿಕೋತ್ಸವ, ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 18 ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಮಾತನಾಡಿದರು.