ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಸಂಭ್ರಮ
Oct 18 2024, 01:17 AM ISTಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ರಾಮಾಯಣ ಕಾವ್ಯದಲ್ಲಿ ಮೂಡಿಬಂದಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದು ವಿಜಯಪುರ ಎಸ್ಬಿ ಕಲಾ ಮತ್ತು ಕೆಸಿಪಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡಮನಿ ಹೇಳಿದರು. ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ರಾಮಾಯಣದಲ್ಲಿ ಮೌಲ್ಯಗಳಾದ ರಾಮನ ಆದರ್ಶ, ಸೀತೆಯ ಪತಿವೃತ, ಕರುಣೆ, ದಯಾಗುಣ, ಭಕ್ತಿ ಮೌಲ್ಯ, ದೌರ್ಜನ್ಯ ತಡೆ ಗಟ್ಟುವಿಕೆ, ನಿಸರ್ಗದ ಪ್ರೇಮ ಸೇರಿದಂತೆ ಅನೇಕ ಮೌಲ್ಯಗಳನ್ನು ಕಾಣುತ್ತೇವೆ.