ಎಲ್ಲ ಧರ್ಮಗಳಿಗಿಂತಲೂ ಮಾನವ ಧರ್ಮವೇ ದೊಡ್ಡದು: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ
Nov 01 2025, 01:45 AM ISTನಿಸ್ವಾರ್ಥದ ಬದುಕಿನಲ್ಲಿ ತೃಪ್ತಿ, ನೆಮ್ಮದಿ ಇರುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಸಮಾಜಕ್ಕೆ, ದುರ್ಬಲರಿಗೆ, ಬಡವರಿಗೆ, ಅಶಕ್ತರಿಗೆ ಸೇವೆ ಸಲ್ಲಿಸಬೇಕು. ಆ ಸೇವೆ ಭಗವಂತನನ್ನು ತಲುಪುತ್ತದೆ. ಕಣ್ಣಿಗೆ ಕಾಣದ ಆ ದೇವರನ್ನು ಸೇವೆಯ ಮೂಲಕ ಕಾಣಬೇಕು. ಮನಸ್ಸನ್ನು ಶುದ್ಧೀಕರಿಸಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಕಾಯಕ ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ.